ಎಲ್ಲಿಂದಲೊ ಕದ್ದಿದ್ದು
ಸ್ವಾತಂತ್ರ್ಯ ಹೋರಾಟದ ಹೊತ್ತು. ಕ್ರಾಂತಿಕಾರಿಯೊಬ್ಬ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಸಂದರ್ಭ. ಪ್ರೀತಿಲತಾ ವಡ್ಡೆದಾರ್ ಎಂಬ ಮತ್ತೊಬ್ಬ ಮಹಿಳಾ ಕ್ರಾಂತಿಕಾರಿಗೆ ಜೈಲಿನಿಂದಲೇ ಪತ್ರ ಬರೆದ. ಅಚಾನಕ್ಕಾಗಿ ನಿನ್ನ ತೋಳಿನ ರವಿಕೆಯ ಮೇಲಿದ್ದ ವಿವೇಕಾನಂದರ ಚಿತ್ರ ನನ್ನ ಕಣ್ಣಿಗೆ ಬಿತ್ತು. ಬಹಳ ಆನಂದವಾಯ್ತು. ನಮ್ಮ ಕಾಲದ ಋಷಿ ಆತ. ಆತನನ್ನು ಅನುಸರಿಸುವುದು ಒಳಿತು.ಮುಂದೆ ಪೊಲೀಸರೊಂದಿಗಿನ ಕದನದಲ್ಲಿ ಆ ಹುಡುಗಿ ಅಸುನೀಗಿದಳು.ಇದು ಸ್ವಾಮಿ ವಿವೇಕಾನಂದರ ದೇಹತ್ಯಾಗದ ಬಹು ವರ್ಷಗಳ ನಂತರ ನಡೆದ ಘಟನೆ. ಅವರು ಬದುಕಿದ್ದಾಗಲೇ ಅಪರೂಪದ ಮತ್ತೊಂದು ಘಟನೆ ಜರುಗಿತ್ತು.ಸ್ವಾಮೀಜಿ ಪ್ರಯಾಣಿಸುತ್ತಿದ್ದ ರೈಲು ತಮ್ಮೂರನ್ನು ಹಾದುಹೋಗಲಿದೆ ಎಂದರಿತ ಒಂದು ಊರಿನ ಜನ ತಮ್ಮ ಊರಿನಲ್ಲಿ ರೈಲು ನಿಲ್ಲಿಸುವಂತೆ ಕೇಳಿಕೊಂಡರು. ಅದನ್ನು ನಿಯಮ ಬಾಹಿರವೆಂದು ಸ್ಟೇಷನ್ ಮಾಸ್ಟರ್ ನಿರಾಕರಿಸಿದಾಗ ಅವರು ಗೋಗರೆದರು. ಆಗಲೂ ಕೇಳುವ ಲಕ್ಷಣಗಳು ಕಾಣದಾದಾಗ ಊರಿನ ಜನ ರೈಲು ಹಳಿಗಳ ಮೇಲೆ ಅಂಗಾತ ಮಲಗಿಬಿಟ್ಟರು. ಶ್ರೇಷ್ಠ ಸಂತನೊಬ್ಬನ ಪಾದಸ್ಪರ್ಷ ನಮ್ಮೂರಿನ ನೆಲಕ್ಕೆ ಆಗಲಿಲ್ಲವೆಂದರೆ ನಮ್ಮೆಲ್ಲರ ಬದುಕು ವ್ಯರ್ಥ ಎನ್ನುವುದು ಅವರ ನಿಲುವಾಗಿತ್ತು. ರೈಲು ಬಂತು. ಆನರು ಹಳಿಯಿಂದ ಅಲುಗಾಡುವ ಲಕ್ಷಣ ಕಾಣದಿದ್ದಾಗ ಸ್ಟೇಷನ್ ಮಾಸ್ಟರ್ ಗಾಬರಿಗೊಂಡು ನಿಲುಗಡೆ ಸೂಚಿಸಿದ. ಆನ ಫ್ಲಾಟ್‌ಫಾರಮ್‌ನತ್ತ ಧಾವಿಸಿದರು. ಸ್ವಾಮೀಜಿ ಮೆಟ್ಟಿಲ ಬಳಿ ಬಂದು, ನಿಂತಿದ್ದ ಜನರತ್ತ ಕೈಬೀಸಿದರು. ರೈಲು ಮತ್ತೆ ಹೊರಟಿತು.ಅಬ್ಬ! ಇದು ವ್ಯಕ್ತಿಯೊಬ್ಬನಿಗೆ ಸಿಗಬಹುದಾದ ಅತ್ಯಂತ ಶ್ರೇಷ್ಠ ಗೌರವ. ಆತನ ಚಿಂತನೆಗಳನ್ನು ಅನುಸರಿಸುತ್ತ ಜೀವ ತೆರುವುದು ಒಂದೆಡೆಯಾದರೆ ಆತನಿಗಾಗಿ ಬಯಸಿ ಪ್ರಾಣ ಕೊಡಲು ಸಿದ್ಧವಾಗುವುದು ಮತ್ತೊಂದು. ಸ್ವಾಮೀಜಿ ಎರಡೂ ರೀತಿಯ ಅನುಯಾಯಿಗಳನ್ನು ಹೊಂದಿದ್ದ ಅಪರೂಪದ ವ್ಯಕ್ತಿಯಾಗಿದ್ದರು.ಅವರು ಹುಟ್ಟಿದ್ದ ಕಾಲಘಟ್ಟವೇ ಅಂಥದ್ದು. ಒಂದೆಡೆ ಮುಸ್ಲಿಮರ ಆಕ್ರಮಣದ ತೀವ್ರ ಪರಿಣಾಮವಾಗಿ, ದೀರ್ಘಕಾಲ ಸ್ವಂತಿಕೆ ಮರೆತುಬಿಟ್ಟಿದ್ದ ಭಾರತ; ಮತ್ತೊಂದೆಡೆ ಇದರ ಹಿಂದುಹಿಂದೆಯೇ ಕ್ರಿಶ್ಚಿಯನ್ನರ ಆಕ್ರಮಣಕ್ಕೆ ಒಳಗಾಗಿ ಬುದ್ಧಿಭ್ರಮಣೆಯಾದಂತೆ ವರ್ತಿಸುತ್ತಿದ್ದ ಇಲ್ಲಿನ ಸಮಾಜ. ಈ ದೃಷ್ಟಿಯಿಂದ ನೋಡಿದರೆ ಬಂಗಾಳ ಇಡಿಯ ಭಾರತದ ಸಣ್ಣ ರೂಪವಾಗಿತ್ತು. ಹೀಗಾಗಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಬ್ಬರೂ ಬಂಗಾಳವನ್ನು ಕೇಂದ್ರವಾಗಿರಿಸಿಕೊಂಡು ತಮ್ಮ ಕಾರ್ಯ ವಿಸ್ತರಿಸಿದರು. ಅದಕ್ಕೇ ಭಗವಂತನೂ ತನ್ನ ಲೀಲಾಕಾರ್ಯಕ್ಕೆ ಬಂಗಾಳವನ್ನೇ ವೇದಿಕೆ ಮಾಡಿಕೊಳ್ಳಬೇಕಾಯ್ತು.ಬುದ್ಧಿವಂತ ಬಂಗಾಳಿಗಳು ಮುಸಲ್ಮಾನ ಪರಂಪರೆಯಿಂದ ವಿಮುಖರಾಗಲು ಅರಸುತ್ತಿದ್ದ ದಾರಿಯಲ್ಲಿ ಏಸುಕ್ರಿಸ್ತ ಬಂದು ನಿಂತ. ರಾಜಾಶ್ರಯವೂ ಇದ್ದುದರಿಂದ ಬುದ್ಧಿಜೀವಿಗಳು ಬಲುಬೇಗ ಏಸುಕ್ರಿಸ್ತನನ್ನು ತಬ್ಬಿಕೊಂಡವು. ಕ್ರಿಸ್ತ ಮತ್ತವನ ಅನುಯಾಯಿಗಳ ಗುಣಗಾನವನ್ನು ನಮ್ಮವರೇ ಜೋರುಜೋರಾಗಿ ಮಾಡತೊಡಗಿದರು. ಹಿಂದೂ ಸಮಾಜ ಅಲ್ಲಾಹನ ಕಬಂದ ಬಾಹುಗಳಿಂದ ಬಿಡಿಸಿಕೊಳ್ಳಲು ಹೋಗಿ ಕ್ರಿಸ್ತನ ಉಸಿರುಗಟ್ಟಿಸುವಂತಹ ಅಪ್ಪುಗೆಯಲ್ಲಿ ಸಿಕ್ಕಿಹಾಕಿಕೊಂಡಿತು. ಆಗ ಹಿಂದೂ ಸಮಾಜ ಕಂಡುಕೊಂಡ ಪರಿಹಾರವೇ ಶ್ರೀರಾಮಕೃಷ್ಣ.ಬಡತನದಲ್ಲಿ ಹುಟ್ಟಿ ಬದುಕಿನುದ್ದಕ್ಕೂ ಸಿರಿವಂತರನ್ನು ಕಾಲಬುಡಕ್ಕೆ ಕೆಡವಿಕೊಂಡವರವರು; ತಾವು ಶಾಲೆಗೆ ಹೋಗಲಿಲ್ಲವಾದರೂ ಇಂಗ್ಲೀಷಲ್ಲಿ ಪುಟಗಟ್ಟಲೆ ಉದ್ಧರಿಸಬಲ್ಲವರನ್ನು ಕೊಠಡಿಯಲ್ಲಿ ಕುಳ್ಳಿರಿಸಿಕೊಂಡು ಪಾಠ ಹೇಳಿದವರು;
ಹುಟ್ಟಿನಿಂದ ಬ್ರಾಹ್ಮಣರಾದರೂ ಅಂತ್ಯಜರ ಸೇವೆಗೆ ಕಟಿಬದ್ಧರಾದವರು; ಸಾಧನೆಯ ವಿಷಯದಲ್ಲಂತೂ ಎಲ್ಲ ಪಂಥಗಳನ್ನು ಒಂದು ಮಾಡಿ ಸಾಕ್ಷಾತ್ಕರಿಸಿಕೊಂಡವರು. ಇಂತಹ ಮೂಲ ವಿಗ್ರಹಕ್ಕೆ ಉತ್ಸವ ಮೂರ್ತಿಯಾಗಿ ಜವಾಬ್ದಾರಿ ನಿರ್ವಹಿಸಿದವರು ಸ್ವಾಮಿ ವಿವೇಕಾನಂದ.ನರೇಂದ್ರನಾಗಿದ್ದ ತರುಣ ವಿವೇಕಾನಂದನಾಗಿ ರೂಪುಗೊಂಡಿದ್ದು ರಾಮಕೃಷ್ಣರ ಗರಡಿಯಲ್ಲಿಯೇ. ಅದುಬಿಡಿ. ಮರಣ ಶಯ್ಯೆಯಲ್ಲಿ ರಾಮಕೃಷ್ಣರು ವಿವೇಕಾನಂದರನ್ನು ಕರೆದು ನು ಜಗತ್ತಿಗೆ ಶಿಕ್ಷಣ ಕೊಡುವೆಎಂದಾಗ ಯಾವ ವಿಶ್ವಧರ್ಮ ಸಮ್ಮೇಳನದ ಉಲ್ಲೇಖವೂ ಇರಲಿಲ್ಲ. ಆಗಿನ್ನೂ ೧೮೮೬. ಮುಂದೆ ಸರ್ವಧರ್ಮ ಸಮ್ಮೇಳನ ನಡೆದಿದ್ದು ಅದಾದ ೭ ವರ್ಷಗಳ ನಂತರ, ೧೮೯೩ರಲ್ಲಿ. ಹೇಗಿದೆ ವರಸೆ?
Subscribe to:
Posts (Atom)
No comments:
Post a Comment